ಜರ್ಮನಿಯಲ್ಲಿ ಹುಟ್ಟಿದ ಮತ್ತು ಅಮೇರಿಕದ ಭೌತವಿಜ್ಞಾನಿಯಾಗಿದ್ದ ಅಟ್ಟೋ ಸ್ಟರ‍್ನ್‌ರವರು ೧೮೮೮ರ ಫೆಬ್ರವರಿ ೧೭ರಂದು ಅಪ್ಪರ್ ಸಿಲೇಸಿಯಾದ ಸೊಹ್ರಾದಲ್ಲಿ (ಈಗ ಪೋಲೆಂಡಿನ ಝೋರಿಯಲ್ಲಿ) ಜನಿಸಿದರು. ಲೂಯಿ ಡುನೋಯರ್‌ರವರು (೧೮೮೦-೧೯೬೩) ೧೯೧೧ರಲ್ಲಿ ‘ಆಣ್ವಿಕ ಧೂಲ ವಿಧಾನ’ವನ್ನೂ ( ), ಅದಕ್ಕೆ ಸಂಬಂಧಿಸಿದ ಸಾಧನವನ್ನೂ ಕಂಡುಹಿಡಿದಿದ್ದರು. ಆ ಸಾಧನವನ್ನು ಉಪಯೋಗಿಸಿಕೊಂಡ ಸ್ಟರ‍್ನ್‌ರವರು ಡುನೋಯರ್‌ರವರ ಆಣ್ವಿಕ ಧೂಲ ವಿಧಾನವನ್ನು ಪರಿಷ್ಕರಿಸಿದರು. ಅದರ ತಂತ್ರವನ್ನು ಉಪಯೋಗಿಸಿಕೊಂಡ ಸ್ಟರ‍್ನ್‌ರವರಿಗೆ ಧೂಲದಲ್ಲಿರುವ ಕಣಗಳ ತರಂಗ ಸ್ವಭಾವಗಳನ್ನು ಗುರುತಿಸಲು ಅವರಿಗೆ ಸಾಧ್ಯವಾಯಿತು. ಲೋಹದ ಪರಮಾಣುಗಳ ಕಾಂತ ಮಹತ್ವವನ್ನು ( ) ಅಳೆಯುವ ಪ್ರಕ್ರಿಯೆಯನ್ನು ಸ್ಟರ‍್ನ್‌ರವರು ಆರಂಭಿಸಿದರು. ಬೆಳ್ಳಿಯ ಪರಮಾಣುವಿನ ಕಾಂತ ಮಹತ್ವವನ್ನು ಕಂಡುಹಿಡಿಯಲು ಅವರು ಸಮೀಕರಣವೊಂದನ್ನು ರೂಪಿಸಿದರು. ಮುಂದೆ ಅವರು ಪ್ರೋಟಾನ್ ಮತ್ತು ಡ್ಯೂಟೆರಾನ್‌ಗಳ ಕಾಂತ ಮಹತ್ವವನ್ನು ೧೯೩೩ರಲ್ಲಿ ಕಂಡುಹಿಡಿದರು. ಸ್ಟರ‍್ನ್‌ರವರು ೧೯೬೯ರ ಆಗಸ್ಟ್ ೧೭ರಂದು ಬಕ್ಲೀಯಲ್ಲಿ ನಿಧನರಾದರು. == ಉಲ್ಲೇಖಗಳು ==